ಪೂಜಾ ಪದ್ಧತಿ ಮತ್ತು ಪ್ರಾರ್ಥನೆ ಹೇಗಿರಬೇಕು?

ಹಿಂದುತ್ವವು ಅನಾದಿಕಾಲದಿಂದಲೂ ಪರಂಪರಾಗತವಾಗಿ ಅರಳಿಕೊಂಡು ಬಂದಂತಹ ಸರ್ವಶ್ರೇಷ್ಠ ಜೀವನ ಪದ್ಧತಿಯ ಆಗರವಾಗಿದೆ. ಪುರೋಗಾಮಿಯಾದ ಚಲನಶೀಲನತೆಯನ್ನು ಮೈಗೂಡಿಸಿಗೊಂಡ ಹಿಂದುತ್ವವು ಸದಾ ವಿಕಸನಗೊಳ್ಳುತ್ತಲಿದೆ. ಅನೇಕಾನೇಕ ಸಾಂಸ್ಕೃತಿಕ ಅಘಾತಗಳನ್ನೂ, ಬಾಹ್ಯ ಆಕ್ರಮಣಗಳನ್ನೂ ಸಮರ್ಥವಾಗಿ ಎದುರಿಸಿ ತನ್ನ ಧೃಢತೆಯನ್ನು ವಿಶದಪಡಿಸಿದೆ. ನಿಜವದ ಹಿಂದುವು ಯಾವಾಗಲೂ ವಿಭಿನ್ನ ಸಂಸ್ಕೃತಿಗಳನ್ನು ಅರಗಿಸಿಕೊಂಡು, ಪ್ರಾಚೀನ ಪರಂಪರೆಯ ತಳಹದಿಯ ಮೇಲೆ ಧೃಡಚಿತ್ತದಿಂದ ತನ್ನ ಕರ್ತವ್ಯಗಳನ್ನು ಪೂರೈಸುವನು. ‘ಯದಾ ಯದಾ ಹಿ: ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾನ್ಯಹಂ’ ಎನ್ನುವ ಭಗವದ್ಗೀತೆಯ ಉಕ್ತಿಯಂತೆ, ಯಾವಾಗ ಪ್ರಕೃತಿಯಲ್ಲಿ ಅಸಮತೋಲತೆ ಉಂಟಾಗುವುದೋ, ಅಂದು ಅದನ್ನು ಸರಿಪಡಿಸಲು ಒಂದು ಶಕ್ತಿಯು ಮೂಡಿಬರುವುದು.
ಬಾಹ್ಯ ಆಕ್ರಮಣಗಳು ಹಾಗೂ ಅನ್ಯ ಸಾಂಸ್ಕೃತಿಕ ಪ್ರಭಾವಗಳಿಂದಾಗಿ ನಮ್ಮ ವೈದಿಕ ಪೂಜಾಪದ್ಧತಿಗಳಲ್ಲಿ ಕೆಲವೊಂದು ಸಂಕುಚಿತ ಮನೋಭಾವಗಳು ಬೆಳೆದುಕೊಂಡವು. ತತ್ಪರಿಣಾಮವಾಗಿ, ಪೂಜೆ ಹಾಗೂ ಹವನಗಳ ಮೂಲ ಉದ್ದೇಶಗಳಿಗೆ ಚ್ಯುತಿಯಾಗಿದೆ. ಕೆಲವು ವ್ಯಕ್ತಿಗಳು, ವಾಣಿಜ್ಯ ಮನೋವೃತ್ತಿಯಿಂದ ಪ್ರೇರಿತರಾಗಿ, ಈ ವಿಧಿಗಳ ನಿಜವಾದ ಅರ್ಥವನ್ನು ಗ್ರಹಿಸದೆ ಪದ್ಧತಿಗಳಲ್ಲಿ ಲೋಪವುಂಟುಮಾಡಿದರು. ಅಶಿಕ್ಷಿತ ವರ್ಗದವರಿಗೆ ಈ ಪದ್ಧತಿಗಳ ಯಥಾವತ್ತದ ಚಿತ್ರಣ ಸಿಗದೆ, ಸಿದ್ದಾಂತಗಳು ಮತ್ತು ನಿಜವಾದ ಅರ್ಚನೆಯ ಮದ್ಯೆ ಇರುವ ವ್ಯತ್ಯಾಸಗಳು ತಿಳಿಯದಾಯಿತು.
ಯಾವುದೇ ಪ್ರಯಾಣಿಕ ರೈಲು ಅಡೆ-ತಡೆಗಳು ಇಲ್ಲದವರೆಗೆ ಸುಗಮವಾಗಿ ಚಲಿಸುತ್ತಿರುತ್ತದೆ. ತಡೆ ಬಂದಾಕ್ಷಣ ರೈಲು ದಾರಿ ತಪ್ಪುವುದು ಮಾತ್ರವಲ್ಲದೆ, ಅದರ ಆಶ್ರಯ ಪಡೆದ ಪ್ರಯಾಣಿಕರೂ ಬವಣೆ ಪಡೆಯಬೇಕಾಗುತ್ತದೆ. ಸಂಬಂಧಿಸಿದ ತಜ್ಞ ಬಂದು ತಡೆ ನಿವಾರಿಸಿದ ನಂತರವೇ ಪ್ರಯಾಣವು ಮುಂದುವರಿಯುವುದು. ಅದೇ ರೀತಿ ಸ್ವಾಮಿಗಳು ತನ್ನ ಸಂಕಲ್ಪ ಶಕ್ತಿ ಹಾಗೂ ದೈವೀಕ ಶಕ್ತಿಯ ಸಂಯೋಗದಿಂದ, ಹಳಿತಪ್ಪಿದ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸುತ್ತಿದ್ದಾರೆ. ಅಲ್ಲಿಂದ ಮುಂದಕ್ಕೆ, ಜನತೆಯು ತಮ್ಮ ಗುರಿಯನ್ನು ತಲುಪಲು ವೈದಿಕ ಪದ್ಧತಿಯನ್ನು ಅನುಸರಿಸಲು ಪ್ರಶಸ್ತವಾದ ತಳಹದಿಯೊನ್ನದಗಿಸುತ್ತಾರೆ.
ಅರ್ಚಕ ಅಥವಾ ಪುರೋಹಿತರು ವೈದಿಕಕ್ರಿಯೆಯನ್ನು ನೆರವೇರಿಸುತ್ತಿರುವಾಗ ಸಾಮಾನ್ಯವಾಗಿ ಪ್ರಾಯಶ್ಚಿತ್ತ ಹೋಮ ಅಥವಾ ಪೂಜೆಯನ್ನು ಮಾಡಿಸುವ ಕರ್ತೃವು ಅದರ ನಿಜವಾದ ಅರ್ಥವನ್ನು ತಿಳಿದಿರುವುದಿಲ್ಲ. ಸಂಕಲ್ಪ ದೀಕ್ಷೆಯ ನಂತರ, ಏಕತಾನತೆಯಿಂದ ಪೂಜೆಯಲ್ಲಿ ಮಗ್ನರಾಗಿರುವುದು ಬಿಟ್ಟು ಆತನು ಅತಿಥಿ ಸತ್ಕಾರದಲ್ಲೇ ಕಾಲ ಕಳೆಯುವನು. ಬ್ರಹ್ಮಾರ್ಪಣವಾದ ನಂತರ ದೇವತೆಗಳು ಸಂತೃಪ್ತರಾಗಿ, ತನ್ನನ್ನು ಆಶೀರ್ವದಿಸಿದರೆಂಬ ಭಾವನೆಯೊಂದಿಗೆ ಮರಳುವನು.
ಶ್ರೀ ಸ್ವಾಮಿಗಳು ಪ್ರಾಯಶ್ಚಿತ್ತ ಹೋಮ/ಪೂಜೆಯನ್ನು ಮಾಡಿಸುವ ವ್ಯಕಿಯು ಪಥಮತ: ತನ್ನನ್ನು ಆ ಪೂಜಾಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಂತೆ ಮತ್ತು ತಾನು ಯಾ ತನ್ನ ಪೂರ್ವಜರು ಹಿಂದೆ ಮಾಡಿದ ತಪ್ಪುಗಳನ್ನು ಕ್ಷಮಿಸುವಂತೆ ದೇವರನ್ನು ಪ್ರಾರ್ಥಿಸುವಂತೆ ಆಗ್ರಹಿಸುತ್ತಾರೆ. ಪಶ್ಚಾತ್ತಾಪ ಭಾವನೆಯೊಂದಿಗೆ ಮಾಡುವ ಪ್ರಾರ್ಥನೆಗೆ ದೇವರು ನಿಶ್ಚಿತವಾಗಿಯೂ ಸ್ಪಂದಿಸುವರು.
ದೋಷಗಳು ನಾವು ಎಸಗುವ ತಪ್ಪುಕ್ರಿಯೆಗಳ ಪ್ರತಿಕ್ರಿಯೆ ಆಗಿವೆ. ಇವು ಪ್ರಕೃತ ಯಾ ಪೂರ್ವಜನುಮದ ಕರ್ಮಾಂಗವಾಗಿರಬಹುದು. ವ್ಯಕ್ತಿಯ ಜೀವನದಲ್ಲಿ, ಈ ಕರ್ಮಾಂಗದೋಷಗಳು ಕಷ್ಟ-ಕಾರ್ಪಣ್ಯಗಳನ್ನು ಹೆಚ್ಚಿಸುತ್ತವೆ. ಈ ದೋಷಗಳ ಪರಿಹಾರವಾಗದೆ ವ್ಯಕ್ತಿಯು ದೇವರನ್ನು ಸೇರಲು ಸಾಧ್ಯವಾಗದು. ಶ್ರೀ ಕ್ಷೇತ್ರದಲ್ಲಿ, ಸ್ವಾಮಿಯವರು ಆದ್ಯಾತ್ಮಿಕ ಚಿಕಿತ್ಸೆಯ ಮೂಲಕ ಜನರಲ್ಲಿರುವಂತಹ ದೋಷಗಳ ಪರಿಹಾರಮಾಡುವ ಸಾಮರ್ಥ್ಯದ ಬಗ್ಗೆ ಭಕ್ತರು ಪೂರ್ಣವಾಗಿ ವಿಶ್ವಾಸಿತರಾಗಿದ್ದಾರೆ.
೧. ಪುನರುತ್ಥಾನ ಎಂದರೇನು?
೨. ಪೂಜಾ ಪದ್ಧತಿ ಮತ್ತು ಪ್ರಾರ್ಥನೆ ಹೇಗಿರಬೇಕು?
೩. ಪ್ರಾರ್ಥನೆ ಎಂದರೇನು?
೪. ಭಕ್ತ ಜನರಿಂದ ತಾಯಿ ಪರಾಶಕ್ತಿಯ ಅಪೇಕ್ಷೆ ಏನು?
೫. ಮಾಧ್ಯಮದ ಅವಶ್ಯಕತೆ ಏನು?