ಮಾಧ್ಯಮದ ಅವಶ್ಯಕತೆ ಏನು?

ಶಕ್ತಿ ಕೇಂದ್ರ ಹಾಗೂ ಸರ್ವ ಸೃಷ್ಠಿಕಾರಕಳಾದ ತಾಯಿ ಪರಾಶಕ್ತಿಯು ಈ ಪ್ರಕೃತಿಯಲ್ಲಿ ಸರ್ವವ್ಯಾಪಿಯಾಗಿ, ಭವ್ಯತೆಯಿಂದ ರಾರಾಜಿಸುತ್ತಿದ್ದಾಳೆ. ಓರ್ವನು ಮಹಾ ನೇಮಿಷ್ಠನಾಗಿದ್ದು, ಅನುಗ್ರಹ ರೂಪದಲ್ಲಿ ಆಕೆಯ ಶಕ್ತಿಯ ಅನುಭವವನ್ನು ಪಡೆಯಬಹುದು. ಒಂದು ಫ್ಯಾನಿನ ಉದಾಹರಣೆಯೊಂದಿಗೆ ಇದನ್ನು ಅರ್ಥೈಸಬಹುದು. ನಾವೆಲ್ಲರೂ ತಿಳಿದಿರುವಂತೆ, ಗಾಳಿಯು ಪ್ರಶಾ೦ತವಾದ ವಾತಾವರಣದಲ್ಲಿ ನಿಶ್ಯಬ್ದವಾಗಿ ಹರಡಿರುತ್ತದೆ. ಫ್ಯಾನಿನ ಸ್ವಿಚ್ಚನ್ನು ಅದುಮಿದ ಕೂಡಲೇ, ಅದು ಗಾಳಿಯನ್ನು ತನ್ನತ್ತ ಸೆಳೆದು ನಮಗೆ ಆಹ್ಲಾದತೆಯನ್ನು ನೀಡುತ್ತದೆ. ಅದೇ ಫ್ಯಾನು ಮಲಿನವಾದ ಗಾಳಿಯನ್ನು ಒಂದು ಕೋಣೆಯಿಂದ ಬರಿದುಮಾಡಿ ಶುದ್ಧೀಕರಿಸಲೂಬಲ್ಲುದು. ಈ ತರಹ ಒಂದು ಫ್ಯಾನು ಧನಾತ್ಮಕವಾದ ಶಕ್ತಿಯನ್ನು ನಮಗೆ ನೀಡಬಲ್ಲುದು ಹಾಗೆಯೇ ಋಣಾತ್ಮಕವಾದ ಶಕ್ತಿಯನ್ನು ನಮ್ಮಿಂದ ವರ್ಜಿಸಲೂಬಲ್ಲುದು. ಯಾವುದೇ ರೀತಿಯಲ್ಲೂ ಆ ಫ್ಯಾನು ಒಂದು ಕಡೆಯಿಂದ ಗಾಳಿಯನ್ನು ಹೀರಿ, ಇನ್ನೊಂದು ಕಡೆಯಿಂದಗಾಳಿಯನ್ನು ವರ್ಜಿಸಿ, ಶುದ್ಧೀಕರಣ ಮಾಧ್ಯಮವಾಗಿ ವರ್ತಿಸುತ್ತದೆ.
ಆದರೆ, ಫ್ಯಾನಿನ ಬಾಳ್ವಿಕೆ ಹಾಗೂ ಸಾಮರ್ಥ್ಯ ಅದರ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಹಾಗೇನೇ, ಅದರಿಂದುಂಟಾಗುವ ಪರಿಹಾರವು (ನೆಮ್ಮದಿಯು) ವ್ಯಕ್ತಿಯ ಬಳಲಿಕೆ ಮತ್ತು ಲಭ್ಯವಿರುವ ಸಂಪನ್ಮೂಲದ ಸರಿಯಾದ ಬಳಕೆ – ಇವೆರೆಡನ್ನೂ ಅವಲಂಬಿಸಿರುತ್ತದೆ. ಯಾಂತ್ರಿಕ ಸಾಧನದ ಸಾಮರ್ಥ್ಯವೂ ಅದರ ಸವೆಯುವಿಕೆಯನ್ನು ಅವಲಂಬಿಸಿರುತ್ತದೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ಒಂದು ವ್ಯಕ್ತಿಗೆ ಲಭಿಸುವ ಪರಿಹರವು ಮಾಧ್ಯಮದ ಗುಣಮಟ್ಟ ಮತ್ತು ಪರಿಹಾರ ಯಾಚಿಸುವ ವ್ಯಕ್ತಿಯ ಪರಿಶುದ್ಧತೆಗೆ ಅನುಸಾರವಾಗಿರುತ್ತದೆ.
ಇನ್ನೂ ಅನೇಕ ಉದಾಹರಣೆಗಳು ಈ ಮೇಲೆ ವಿವರಿಸಿದಂತಹ ವಿಷಯಗಳನ್ನು ಪುಷ್ಟೀಕರಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವಾಗಲೂ ಶಕ್ತಿಯನ್ನು ರೂಪಾಂತರಗೊಳಿಸಲು ಮಾಧ್ಯಮದ ಆಸರೆ ಬೇಕೇಬೇಕು. ಜಲವಿದ್ಯುತ್ತಿಗೆ ಟರ್ಬೈನ್, ಅಣುಶಕ್ತಿಗೆ ರಿಯಾಕ್ಟರ್ ಬೇಕಾದಂತೆ, ಯಾವುದೇ ಶಕ್ತಿಯ ಉಪಯೋಗದ ಸಾಧನವಾಗಿ ಮಾಧ್ಯಮವು ಬೇಕು. ಇವೆಲ್ಲದರ ಉಪಯುಕ್ತತೆಯು, ಆ ಶಕ್ತಿಯನ್ನು ನಿರ್ವಹಿಸುವ ರೀತ್ಯಾನುಸಾರ ನಿರ್ಧರಿಸಲ್ಪಡುತ್ತದೆ ಮತ್ತು ಅದರಂತೆ, ಆ ಶಕ್ತಿಯು ಪೂರಕ ಇಲ್ಲವೇ ವಿನಾಶಕವಾಗಬಲ್ಲುದು.
ಎಲ್ಲ ಜನರೂ ಅವರವರ ಕರ್ಮಾಂಗದೋಷಗಳಿಗೆ ಅಂಟಿಕೋ೦ಡಿರುತ್ತಾರೆ ಮತ್ತು ಇದರಿಂದಾಗಿ ಅವರ ಜೀವನದಲ್ಲಿ ಏರುಪೇರಾಗುತ್ತದೆ. ತನ್ನ ಪ್ರಕೃತ ಯಾ ಪೂರ್ವಜನ್ಮಗಳಲ್ಲಿ ಉಂಟಾದ ಕರ್ತವ್ಯಚ್ಯುತಿಗಳೇ ಕರ್ಮಾಂಗದೋಷಗಳಾಗಿ ಮಾರ್ಪಾಡಾಗುತ್ತವೆ ಹಾಗೂ ಭವಿಷ್ಯತ್ತಿನಲ್ಲಿ ಪರಿಣಾಮ ಬೀರುತ್ತವೆ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ. ಅಧರ್ಮ ಕಾರ್ಯ ಯಾ ತಪ್ಪು ಕೆಲಸಗಳು ಪ್ರತಿಯಾಗಿ ಮನುಷ್ಯನ ಭವಿಷ್ಯತ್ತಿನಲ್ಲಿ ಮಾನಸಿಕ-ದೈಹಿಕ ತೊಂದರೆಗಳಿಗೆ ಕಾರಣೀಭೂತವಾಗಬಲ್ಲವು. ಇವೆಲ್ಲದರ ಪರಿಹಾರ ಕೇವಲ ದೈವೀಕ ಮಧ್ಯಸ್ಥಿಕೆಯಿಂದಲೇ ದೊರೆಯಬಲ್ಲುದು. ಧರ್ಮಶೃದ್ಧೆಯಲ್ಲಿರುವ ವ್ಯಕ್ತಿಗೆ ಕೇಂದ್ರೀಕೃತವಾಗುವ ಏಕಮಾತ್ರ ದೈವೀಕ ಕಿರಣವೇ ಆತನ ಬದುಕಿನ ಜಂಜಾಟಗಳಿಗೆ ಮುಕ್ತಿ ನೀಡಬಲ್ಲುದು. ಆದರೆ, ಇವೆಲ್ಲವೂ ಸುಗಮವಾಗಿ ಸಾಗಲು, ದೈವೀಕ ಶಕ್ತಿಯ ಕಂಪನಕ್ಕೆ ಸರಿಯಾಗಿ ಕಂಪಿಸುವ ಮಾಧ್ಯಮದ ಅಗತ್ಯವಿದೆ. ಇಂತಹ ಮಾಧ್ಯಮವು ಭಕ್ತನ ಪರಿಹಾರಾರ್ಥವಾದ ದೈವೀಕ ಅನುಗ್ರಹದ ಸಂಪರ್ಕ ಸಾಧನವಾಗಿ, ಆತನು ಪರಿಶುದ್ಧನಾಗುವಲ್ಲಿ ಸಹಕಾರಿಯಾಗುವುದು. ಪರಿಶುದ್ಧತೆಯ ಅಂಶವು ಲಭ್ಯ ಮಾಧ್ಯಮ ಮತ್ತು ಪರಿಹಾರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ.
ಶ್ರೀ ಕ್ಷೇತ್ರದಲ್ಲಿ ಆದಿ ಪರಾಶಕ್ತಿಯ ದಿವ್ಯ ಪ್ರಭೆಯ ಮಾಧ್ಯಮವಾಗಿ ಉಪಸ್ಥಿತರಿರುವ ಶ್ರೀ ಸ್ವಾಮಿಗಳು ಭಕ್ತರ ಸಂಕಷ್ಟ ಪರಿಹಾರಕ್ಕಾಗಿ ಕಟಿಬದ್ಧರಾಗಿದ್ದಾರೆ. ನಿಸ್ವಾರ್ಥತೆ ಹಾಗೂ ಉದಾತ್ತ ಮನೋಭಾವದ ಸ್ಪೂರ್ತಿಯಲ್ಲಿ ಹಾಗೂ ಮಾತೆಯ ಮಾರ್ಗದರ್ಶನದಲ್ಲಿ ಸ್ವಾಮಿಗಳು ಅಂಬಿಗನಾಗಿ ನಮ್ಮನ್ನು ಯಾತನೆ ಎಂಬ ಸಾಗರದ ಗಡಿ ದಾಟಿಸಿ, ಆದರ್ಶಮಯ ಜೀವನದತ್ತ ಒಯ್ಯುವರು. ಇಲ್ಲಿ ಸಿಗುವ ಪರಿಹಾರವು ಶ್ರೀ ಮಾತೆಯ ಅನುಗ್ರಹದ ಪ್ರಕಟೀಕರಣವೇ ಆಗಿದೆ. ಸ್ವಾಮಿಗಳು ಆದ್ಯಾತ್ಮಿಕ ಶಕ್ತಿಯ ಶ್ರೀಮಂತಿಕೆಯೊಂದಿಗೆ ಸಂಯೋಜಿತವಾದ ಭಕ್ತಜನರಿಂದ ಗೌರವಪೂರ್ಣವಾಗಿ ಅರ್ಪಿಸಲ್ಪಡುವಂತಹ ಪಶ್ಚಾತ್ತಾಪದ ಕಣ್ಣೀರು ‘ಪುಣ್ಯಶೇಷ’ದ ಸಂಚಯಕ್ಕೆ ಮೂಲವಾಗಿದೆ. ಈ ಪುಣ್ಯಶೇಷವು ಮಹಾಮಾತೆಯ ಕರುಣಾಸಾಗರದ ಬಿಂದುಗಳ ಸಂಗ್ರಹವೇ ಆಗಿದೆ. ಇಂತಹ ಸಾವಧಾನದ ಹಾಗೂ ಸ್ಥಿರವಾದ ಮಾರ್ಗದ ಮೂಲಕ ದೊರೆಯುವ ಪುಣ್ಯಶೇಷದಿಂದಾಗಿ ಭಕ್ತಜನರ ಋಣಾತ್ಮಕ ಅಂಶಗಳು ನಿವಾರಣೆಯಾಗಿ, ಸಂಚಿತ ಕರ್ಮಾಂಗದೋಷಗಳು ಪರಿಹಾರವಾಗಿ ಭಾಧಾಮುಕ್ತರಾಗುವರು.
ನಾವು ಪ್ರಾಪಂಚಿಕ ಮಾಧ್ಯಮ ಮತ್ತು ಆದ್ಯಾತ್ಮಿಕ ಮಾಧ್ಯಮಗಳ ಕುರಿತು ವಿಷದವಾಗಿ ವಿಶ್ಲೇಷಿಸಿದಾಗ, ನಿಸ್ಸಂಶಯವಾಗಿ  ಪ್ರಾಪಂಚಿಕ ಮಾಧ್ಯಮದ ನಶ್ವರತೆ ಹಾಗೂ ಆದ್ಯಾತ್ಮಿಕ ಮಾಧ್ಯಮದ ಶಾಶ್ವತತೆಯು ಮನದಟ್ಟಾಗುವುದು.
ದೇವಾಂಶಸಂಭೂತರಾದ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರ ಮೂಲಕ ಪ್ರವಹಿಸಲ್ಪಡುವಂತಹ ಪರಮಪಾವನ ಆದ್ಯಾತ್ಮಿಕ ಶಕ್ತಿಯು ಮನುಷ್ಯನ ತೊಳಲಾಟ-ನರಳಾಟಗಳಿಗೆ ಮುಕ್ತಿಯ ಕಾಣಿಸಿ, ಮಾನವತೆಯ ಉತ್ತುಂಗಕ್ಕೇರಿಸುವುದು. ಇಂತಹ ಮಾಧ್ಯಮದ ಕೃಪೆಯಿಂದ ಮನುಕುಲದಲ್ಲಿ ಸುಭಿಕ್ಷೆಯುಂಟಾಗಿ, ಶಿಷ್ಟಾಚಾರವೇ ಆಧಾರವಾದ ಸುವರ್ಣಯುಗದ ಉದಯವಾಗುವುದು.
೧. ಪುನರುತ್ಥಾನ ಎಂದರೇನು?
೨. ಪೂಜಾ ಪದ್ಧತಿ ಮತ್ತು ಪ್ರಾರ್ಥನೆ ಹೇಗಿರಬೇಕು?
೩. ಪ್ರಾರ್ಥನೆ ಎಂದರೇನು?
೪. ಭಕ್ತ ಜನರಿಂದ ತಾಯಿ ಪರಾಶಕ್ತಿಯ ಅಪೇಕ್ಷೆ ಏನು?
೫. ಮಾಧ್ಯಮದ ಅವಶ್ಯಕತೆ ಏನು?