ಪುನರುತ್ಥಾನ ಎಂದರೇನು?

ಪರಕೀಯರ ಆಕ್ರಮಣ ಮತ್ತು ಆಂತರಿಕ ಕಲಹಗಳಿಂದಾಗಿ ನಮ್ಮಲ್ಲಿಯ ಅನೇಕಾನೇಕ ದೇವಸ್ಥಾನ ಯಾ ಪೂಜಾಮಂದಿರಗಳು ನಾಶವಾಗಲ್ಪಟ್ಟಿವೆ. ಇಲ್ಲಿ ಆರಾಧನೆಗೊಳ್ಳುತ್ತಿದ್ದಂತಹ ದೇವ-ದೇವತೆಯರಿಗೆ ಸರಿಯಾದ ಆಶ್ರಯವಿಲ್ಲದೆ, ಈ ಶಕ್ತಿಗಳು ಚರವಾಗಿದೆ. ಸರಿಯಾದ ಪೂಜೆ-ಪುರಸ್ಕಾರವಿಲ್ಲದೆ, ಶೃದ್ಧಾಲೋಪವಾಗಿ ಶಕ್ತಿಗಳು ‘ಭಾದಾಶಕ್ತಿ’ ಗಳಾಗಿ ಮಾರ್ಪಟ್ಟವು ಹಾಗೂ ಹಿಂದೆ ತಾವು ನೆಲೆಸಿದಂತಹ ಕ್ಷೇತ್ರಗಳಲ್ಲಿ ಅಸಂಖ್ಯಾತ ಸಮಸ್ಯೆಗಳಿಗೆ ಕಾರಣೀಭೂತವಾದವು. ಇಂತಹ ಭಾಧಾಶಕ್ತಿಗಳ ಶುದ್ಧೀಕರಣ ಹಾಗೂ ಪುನಃಸ್ಥಾಪನೆಯೇ ಶ್ರೀ ಸ್ವಾಮಿಯವರ ಅತಿಮುಖ್ಯ ಜವಬ್ಧಾರಿಯಾಗಿದೆ. ಇದುವರೆಗೆ ಯಾರೂ ಮಾಡಿರದಂತಹ. ಪ್ರಯತ್ನ ಮಾಡಿದ್ದರೂ ಯಶಸ್ವಿಯಾಗದಂತಹ ವಿಶೇಷವಾದ ರೀತಿಯಲ್ಲಿ ಸ್ವಾಮಿಗಳು ಕರ್ತವ್ಯವೆಸಗುತ್ತಿದ್ದಾರೆ ಮತ್ತು ತನ್ನ ಭಕ್ತಾಧಿಗಳಿಗೆ ಜತೆಗೆಯೇ ಜ್ಯೋತಿಷ್ಯಶಾಸ್ತ್ರವನ್ನೂ ಕೂಡಾ ಅವಲಂಬಿಸಲು ಸಲಹೆ ನೀಡುತ್ತಾರೆ. ಈ ತರಹ, ತತ್ವಗಳ ಸಮ್ಮಿಲನದಿಂದ ದೇವ-ದೈವ ಚೈತನ್ಯಗಳ ಶುದ್ಧೀಕರಣ ಮಾಡಿ. ಪುನರ್ನೆಲೆಯ ಕಲ್ಪಿಸಿ. ಮೂಲವೇತ್ತವಾದ ಪವಿತ್ರತೆಯನ್ನು ಪ್ರತಿಷ್ಠಾಪಿಸುವ ಮಹಾಕ್ರಿಯೆಯೇ “ಪುನರುತ್ಥಾನ” ಕ್ರಿಯೆ.
ಹೆಚ್ಚಿನ ಹಿಂದೂ ಕುಟುಂಬಗಳ ಜೀವನ ಶೈಲಿಯು ಭಾರತೀಯತೆ ಮತ್ತು ಪಾಶ್ಚಾತ್ಯತೆಯ ಮದ್ಯೆ ಹರಿದು ಹಂಚಿಹೋಗಿದೆ. ಪೂಜಾವಿಧಾನದ ಬಗ್ಗೆ ಸರಿಯಾದ ಪರಿಕಲ್ಪನೆಯೇ ಇಲ್ಲವಾಗಿದೆ. ಕೆಲವು ವ್ಯಕ್ತಿಗಳು ಪ್ರತಿಪಾದಿಸುವ ಅಸ್ಪಷ್ಟವಾದ ಆಚರಣೆಗಳೇ ಇದಕ್ಕೆ ಕಾರಣವಾಗಿದೆ. ಶ್ರೀ ಸ್ವಾಮಿಯವರು ಮೌಲ್ಯವರ್ಧಿತ ಚೌಕಟ್ಟಿನೊಳಗೆ, ಎಲ್ಲಾ ವರ್ಗದ ಜನರನ್ನೂ ವಿಶ್ವಬ್ರಾತೃತ್ವದ ಭಾವನೆಯಲ್ಲಿ ಒಂದೇ ತೆಕ್ಕೆಯೊಳಗೆ ಒಗ್ಗೂಡಿಸಿ, ಒಂದು ಕ್ರಿಯಾತ್ಮಕ ಹಾಗೂ ಚೈತನ್ಯಶಾಲಿಯಾದ ಹಿಂದುತ್ವದ ಶಕೆಯನ್ನು ಅರಳಿಸಲು ಅವಿರತ ಪ್ರಯತ್ನಿಸುತ್ತಿದ್ದಾರೆ.
೧. ಪುನರುತ್ಥಾನ ಎಂದರೇನು?
೨. ಪೂಜಾ ಪದ್ಧತಿ ಮತ್ತು ಪ್ರಾರ್ಥನೆ ಹೇಗಿರಬೇಕು?
೩. ಪ್ರಾರ್ಥನೆ ಎಂದರೇನು?
೪. ಭಕ್ತ ಜನರಿಂದ ತಾಯಿ ಪರಾಶಕ್ತಿಯ ಅಪೇಕ್ಷೆ ಏನು?
೫. ಮಾಧ್ಯಮದ ಅವಶ್ಯಕತೆ ಏನು?