ಪ್ರಾರ್ಥನೆ ಎಂದರೇನು?

ನಮ್ಮ ಸನಾತನ ಧರ್ಮವು ಸಾಮೂಹಿಕ ಪ್ರಾರ್ಥನೆಗೆ ಒತ್ತುಕೊಟ್ಟಿದೆ. ಹಿಂದಿನ ಕಾಲದಲ್ಲಿ ಅದು ಸಾರ್ವತ್ರಿಕವಾಗಿ ಆಚರಣೆಯಲ್ಲಿತ್ತು. ಕಾಲಸವೆದಂತೆ, ಸಮಾಜ ವ್ಯವಸ್ಥೆಯಲ್ಲಿ ಬದಲಾವಣೆಗಳುಂಟಾಗಿ ಸಾಮೂಹಿಕ ಪ್ರಾರ್ಥನೆಯ ಪ್ರಾಮುಖ್ಯತೆ ಬದಿಗೊತ್ತಲ್ಪಟ್ಟಿತು. ಹಿಂದುಗಳು ಹೆಚ್ಚು-ಹೆಚ್ಚಾಗಿ ವೈಯಕ್ತಿಕ ಚಿಂತನೆ ಮತು ಪದ್ಧತಿಗಳತ್ತ ವಾಲತೊಡಗಿದರು. ಅಕ್ಷರಶ: ಸಮೂಹ ಯಾಚನೆಯ ಕಲ್ಪನೆ ಮತ್ತು ಅರ್ಥ ಅಗೋಚರವಾಗತೊಡಗಿತು.
ಶ್ರೀ ಸ್ವಾಮಿಯವರು ನಿಸ್ವಾರ್ಹ ಭಾವನೆಯ ಮನದಾಳದ ತುಡಿತದ ಸಾಮೂಹಿಕ ಪ್ರಾರ್ಥನೆಗೆ ಪ್ರಾಶಸ್ತ್ಯ ಕೊಡುತ್ತಾರೆ ಹಾಗೂ ‘ವಸುದೈವ ಕುಟುಂಬಕಂ’ ಎಂಬಂತೆ ಜಾಗತಿಕ ಸಹೋದರತ್ವದ ತತ್ತ್ವವನ್ನು ಪ್ರತಿಪಾದಿಸುತ್ತರೆ. ಈ ತತ್ತ್ವವೇ ಸೌಜನ್ಯಮಯ ಸಹಕಾರತೆಗೆ ಪ್ರೇರಣೆ ನೀಡಬಲ್ಲುದು.
ಅನ್ನದಾನ
ಶ್ರೀ ಕ್ಷೇತ್ರದಲ್ಲಿ ಮಾಧುರ್ಯಭರಿತ ಅನ್ನದಾನವು ಪುಷ್ಟಿದಾಯಕಳಾದ ಶ್ರೀ ಅನ್ನಪೂರ್ಣೇಶ್ವರೀ ಮಾತೆಯ ಸಾಕ್ಷಾರತೆಗೆ ಸಾಕ್ಷಿಯಾಗಿದೆ. ಅನ್ನ ಪ್ರಾಶನದ ಮೊದಲು ಭಕ್ತರು ಪಠಿಸುವ ಅನ್ನಪೂರ್ಣೇಶ್ವರೀ ಮಂತ್ರವು ಮನಸ್ಸಿಗೆ ಮುದವನ್ನು ನೀಡುವುದು. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಅನ್ನದಾನದಲ್ಲಿ ಭಾಗಿಯಾಗುತ್ತಾರೆ. ಶ್ರೀ ಸ್ವಾಮಿಯವರ ಆಶೀರ್ವಾದ ಮತ್ತು ಅನ್ನಪೂರ್ಣೇಶ್ವರೀ ಮಾತೆಯ ಪ್ರಸಾದ-ಇವೆರಡೂ ಭಕ್ತಜನರನ್ನು ಅವರ ಕಷ್ಟ-ಕೋಟಳೆಗಳನ್ನೆದುರಿಸುವಲ್ಲಿ ಸಜ್ಜುಗೊಳಿಸುತ್ತದೆ.
೧. ಪುನರುತ್ಥಾನ ಎಂದರೇನು?
೨. ಪೂಜಾ ಪದ್ಧತಿ ಮತ್ತು ಪ್ರಾರ್ಥನೆ ಹೇಗಿರಬೇಕು?
೩. ಪ್ರಾರ್ಥನೆ ಎಂದರೇನು?
೪. ಭಕ್ತ ಜನರಿಂದ ತಾಯಿ ಪರಾಶಕ್ತಿಯ ಅಪೇಕ್ಷೆ ಏನು?
೫. ಮಾಧ್ಯಮದ ಅವಶ್ಯಕತೆ ಏನು?