ಕಾರ್ಯಕ್ರಮಗಳು

ಸೋಮವಾರ ದಿನವು ಶ್ರೀ ಸ್ವಾಮಿಗಳಿಗೆ ವಿಶ್ರಾಂತಿಯ ದಿನವಾಗಿದ್ದು, ಅಂದು ಭಕ್ತಾದಿಗಳಿಗೆ ಸಚಿದರ್ಶನವನ್ನು ನೀಡುವುದಿಲ್ಲ. ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರಗಳಂದು ಜನರು ವೈಯಕ್ತಿಕವಾಗಿ ಸ್ವಾಮಿಗಳನ್ನು ಭೇಟಿಮಾಡಿ ತಮ್ಮ ಸಮಸ್ಯೆಗಳ ಬಗ್ಗೆ ಅರುಹಬಹುದು. ಗುರುವಾರ ಮತ್ತು ಶನಿವಾರ ದೇವನಡೆಯ ಪ್ರಕ್ರಿಯೆ ಇರುವುದು. ಅಂದು ಸ್ವಾಮಿಗಳು ತಾಯಿಯ ಇಚ್ಚೆಯಂತೆ ಹಾಗು ತಮ್ಮ ಸಂಕಲ್ಪದಂತೆ ದೈವ-ದೇವರುಗಳು ಮತ್ತು ಚೈತನ್ಯಶಕ್ತಿಗಳನ್ನು ಕೆಲವು ವ್ಯಕ್ತಿಗಳ ಮುಖಾಂತರ ಅವಾಹಿಸುತ್ತಾರೆ. ಯಾರ ಕಾಂತೀಯ ಶಕ್ತಿಯ ಪ್ರಭೆಯು ಈ ಶಕ್ತಿಗಳಿಗೆ ಸ್ಪಂದಿಸುವುದೋ, ಅಂತಹ ವ್ಯಕ್ತಿಗಳೇ ಅವುಗಳ ಸಂಪರ್ಕ ಮಾಧ್ಯಮವಾಗುತ್ತಾರೆ. ತದನಂತರ, ಪ್ರಕ್ರಿಯೆಯಲ್ಲಿ ಸ್ವಾಮಿಗಳು ಕಾಲಗರ್ಭಕ್ಕೆ ಸೇರಿದ ಸಂಬಂಧಿತ ಘಟನಾವಳಿಗಳ ಸುರುಳಿಯನ್ನು ಎಳೆ-ಎಳೆಯಾಗಿ ಬಿಚ್ಚಿ, ಮುಲದೋಷಗಳ ಪರದೆಯ ಪದರು-ಪದರಾಗಿ ತೆರೆದು, ಸರಿಪಡಿಸಿ ಶುಧ್ಧೀಕರಿಸುವ ಅದ್ಯಾತ್ಮಿಕ ಕ್ರಿಯೆಯಲ್ಲಿ ತೊಡಗುತ್ತಾರೆ.

ದೇವನಡೆಯ ಮರುದಿನ, ಅಂದರೆ ಶುಕ್ರವಾರ ಮತ್ತು ಭಾನುವಾರದಂದು ಬೆಳಗಿನ ಸಾಮೂಹಿಕ ಪ್ರಾರ್ಥನೆಯ ನಂತರ, ಪರಿಹಾರ ನಡೆಯು ಆರಂಭವಾಗುತ್ತದೆ. ಪ್ರಾರಂಭದಲ್ಲಿ ದೇವಸ್ಥಾನ ಯಾ ಪೂಜಾಮಂದಿರಗಳಿಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರವಾಗಿಸಿ. ನಂತರ ಇತರ ಭಕ್ತಾದಿಗಳ ಸರದಿ ಇರುತ್ತದೆ. ಈನಡೆಗಳಲ್ಲಿ ಭಕ್ತರ ಕರ್ಮಾಂಗ ದೋಷಗಳ ಪರಿಹಾರ ಹಾಗೂ ದೇವಸ್ಥಾನಗಳಿಗೆ ಸಂಬಂಧಪಟ್ಟಂತಹ ಭಾಧಾಶಕ್ತಿಗಳ ವಿಭಜನೆ/ನಿವಾರಣೆಯಾಗುತ್ತದೆ. ಸರತಿಯಲ್ಲಿ ಬರುವ ಭಕ್ತ ಜನ ಸಮೂಹಕ್ಕೆ ಸ್ವಾಮಿಯವರು, ಅವರ ಕಷ್ಟ-ಕಾರ್ಪಣ್ಯಗಳ ನಿವಾರಣಾರ್ಥ ಸೂಕ್ತವಾದ ಸತ್ಯಪಥವ ತೋರಿಸಿ, ಪರಿಹಾರವೊದಗಿಸುತ್ತಾರೆ. ಹೀಗೆ ಇಂತಹ ದಿನಗಳಲ್ಲಿ ಸಹಸ್ರಾರು ಕುಟುಂಬಗಳು ಪರಿಹಾರ ಪಡಕೊಂಡು ಕೃತಾರ್ಥರಾಗಿರುತ್ತಾರೆ.