ಕಾಲಾನುಕ್ರಮಣಿಕೆ

ಶ್ರೀ ಕ್ಷೇತ್ರದಲ್ಲಿ ಪಸರಿಸಿರುವ ದೈವೀಕ ಪ್ರಭೆಯ ಉಗಮಕ್ಕೂ , ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಗಣಪತಿ ಕೋಟೆಕಾರ್ ರವರ ಸುಪುತ್ರರಾದ ಶ್ರೀ ನರೇಂದ್ರನಾಥ ಕೋಟೆಕಾರ್ ರವರ ಜನ್ಮ ವ್ರತ್ತಾಂತಕ್ಕೂ ಅಲೌಕಿಕವಾದ ಸಂಬಂಧವಿದೆ. ವೃತ್ತಿರಂಗದಲ್ಲಿ ಎಲೆಕ್ತ್ರಿಕಲ್ ಕಂಟ್ರಾಕ್ಟರ್ ಹಾಗೂ ಡೀಲರ್ ಆಗಿದ್ದು ಹಿಂದೆ ಅಪಾರ ಯಶಸ್ಸನ್ನು ಗಳಿಸಿದ್ದರು. ಕೊಂಕಣ್ ರೈಲ್ವೇ , ಹೇಮಾವತಿ ಅಣೆಕಟ್ಟು ಯೋಜನೆಯೇ ಮುಂತಾದ ಬ್ರಹತ್ ಕಾಮಗಾರಿಗಳಲ್ಲಿ ಭಾಗಿಯಾದ ಶ್ರೇಯಸ್ಕರ ಸಾಧನೆ ಇವರದಾಗಿದೆ. ತಮ್ಮ ಕಾರ್ಯಕ್ಷೇತ್ರವನ್ನು ಉದ್ಯಮರಂಗಕ್ಕೂ ವಿಸ್ತರಿಸಿ, ಮೆ ಪ್ರೆಸ್ಟೀಜ್ ಕೇಬಲ್ ಪ್ರೈವೆಟ್ ಲಿಮಿಟೆಡ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಿ, ಅದರ ಮುಖ್ಯ ನಿರ್ವಹಣಾಧಿಕಾರಿಯಾಗಿ ದುಡಿದವರಿವರು. ಇಷ್ಟಕ್ಕೇ ಸೀಮಿತಗೊಳ್ಲದ ಇವರ ಕಾರ್ಯವ್ಯಾಪ್ತಿಯು ಸಮಾಜ ಸೇವಾ ಪ್ರಕಲ್ಪಕ್ಕೂ ವಿಸ್ತರಿಸಿ, ಲಯನ್ಸ್ ಕ್ಲಬ್ ನಂತಹ ಹಲವಾರು ಸೇವಾಸಂಸ್ಥೆಗಳ ಸ್ಥಳೀಯಮಟ್ಟದ ಅಧ್ವರ್ಯುತನವನ್ನು ವಹಿಸಿಕೊಡವರಾಗಿರುತ್ತಾರೆ. ಈ ತರಹ, ಇವರ ಅನುಭವದ ಪರಿಧಿಯು ವೈವಿಧ್ಯಮಯವಾದ ವಿಶಿಷ್ಟತೆಯ ಮುತ್ತುಗಳಿಂದ ಪೋಣಿಸಲ್ಪಟ್ಟಂತಹ ಸರಮಾಲೆಯಾಗಿದೆ.
ಶ್ರೀ ನರೇಂದ್ರನಾಥರ ಅಧ್ಯಾತ್ಮಿಕ ಅನುಭವಗಳು ಸುಮಾರು ೧೨ ವರುಷಗಳ ಹಿಂದೆ ವಿಪರೀತ ಕಂಪನಗಳಿಂದೊಡಗೂಡಿದ ತನ್ಮಯಾವಸ್ಥೆಯ ರೂಪದಲ್ಲಿ ಪ್ರಕಟವಾಗತೊಡಗಿದವು. ಈ ಸ್ಥಿತಿಯ ತೀವ್ರತೆ ಎಷ್ಟಿತ್ತು ಎಂದರೆ, ಅದಕ್ಕೆ ದಿನ ರಾತ್ರಿಗಳೆನ್ನುವ ಭೇದವೇ ಇರಲಿಲ್ಲ. ಅದರೊಂದಿಗೇ, ಕಾಲಗರ್ಭಕೋಶದಲ್ಲಿ ಹುದುಗಿದ್ದ ಹಳೆಗನ್ನಡ ಭಾಷೆಯಲ್ಲಿ ನಿರರ್ಗಳ ಸ್ಫುರಣಗಳ ಮಹಾಪೂರವೇ ಹರಿದುಬಂದು, ಅತ್ಯಂತ ಶ್ರೇಷ್ಠ ಮಟ್ಟದ ಜ್ನಾನ ಭಂಡಾರದ ಅನರ್ಘ್ಯ ರತ್ನಗಳೇ ಮೂಡಿಬಂದವು. ಅದು ಶ್ರೀಗಳ ಜೀವನದಲ್ಲಿ ಅವಿರ್ಭವಿಸಲಿರುವ ಸಂಕ್ರಮಣ ಕಾಲಘಟ್ಟದ ಮುನ್ಸೂಚನೆ ಆಗಿತ್ತು. ಅದೇ ಹಂತದಲ್ಲಿ ತಾಯಿ ಪರಾಶಕ್ಥಿಯು ಅವರಲ್ಲಿ ನೆಲೆಯಾಗಿ ಅಧ್ಯಾತ್ಮಿಕ ಸೆಲೆಯನ್ನು ಸ್ಪುರಿಸಿರುವಳು. ತನ್ಂಉಲಕ ಆ ಮಹಾತಾಯಿಯು ಶ್ರೀಗಳ ಪುನರ್ಜನ್ಮಕ್ಕೆ ಸಂಬಂಧಿಸಿದ ನಾಥಪಂಥ ದ ತ್ಯಾಗ ಹಾಗೂ ಕದಂಬ ರಾಜವಂಶದ ವಿಷಾದನೀಯ ಅವಸಾನದ ಸ್ಮ್ರುತಿಸುರುಳಿಯನ್ನು ಬಿಚ್ಚಿ, ಭವಿಷ್ಯತ್ತಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ಸರಿಯಾದ ಪ್ರಜ್ಣೆ ಮುಡಿಸುವ ಮಹಾಕಾರ್ಯಕ್ಕೆ ಶ್ರೀ ನರೇಂದ್ರನಾಥರನ್ನು ಉಪಾದಿಯಾಗಿಸಿದಳು. ಅಂದಿನಿಂದ, ಆ ತಾಯಿಯು ತನ್ನ ಭಕ್ತಾದಿಗಳಿಗೆ ಶ್ರೀಗಳ ಮೂಲಕ ಅದ್ಯಾತ್ಮಿಕ ಸಿಂಚನವನ್ನು ನೀಡುತ್ತಾ, ಪುನರುತ್ಥಾನ ಕ್ರಿಯೆಯನ್ನು ಮುಂದುವರಿಸುತ್ತಿದ್ದಾಳೆ.
ಆಮೇಲೆ, ಶ್ರೀ ನರೇಂದ್ರನಾಥರಿಗೆ ತನ್ನ ದೈನಂದಿನ ಕೆಲಸ ಕಾರ್ಯಕ್ರಮಗಳನ್ನು ಸರಿಯಾಗಿ ಮಾಡಲಾಗುತ್ತಿರಲಿಲ್ಲ. ಇವೆಲ್ಲಾ ಘಟನೆಗಳು ಬರೀ ಭ್ರಮೆಯೆಂದು ಭಾವಿಸಿ, ನರ ತಜ್ಞರು ಹಾಗೂ ಮಾನಸಿಕ ತಜ್ಞರನ್ನು ಭೇಟಿಯಾಗಿದ್ದಾಯಿತು. ಇವೆಲ್ಲಾ ನಿಷ್ಪಲವಾದಾಗ ಕೊನೆಯ ಆಸರೆಯಾಗಿ ಜ್ಯೋತಿಷ್ಯ ಶಾಸ್ತ್ರಜ್ಞರನ್ನು ಭೇಟಿಯಾದರು.ಪರಿಹಾರಕ್ಕಾಗಿ ಅವರ ಸಲಹೆಯಂತೆ, ಶ್ರೀಯವರು ಪುರಾತನ ಸೋಮೇಶ್ವರ ದೇವಸ್ಥಾನದ ತೀರ್ಥಕೆರೆಯಲ್ಲಿ ಮಿಂದು ಶುಚಿರ್ಭೂತರಾಗಿ ಪೂಜೆ ಸಲ್ಲಿಸಿದರು ಮತ್ತು ತನ್ನ ಮೂಲ ಸ್ಥಾನ ಕೋಟೆಕಾರಿನಲ್ಲಿರುವ ಶ್ರೀ ಕೊಂಡಾಣ ಪಿಲಿ ಚಾಮುಂಡಿ ಕ್ಷೇತ್ರದಲ್ಲಿಯೂ ಪೂಜೆ ಸಲ್ಲಿಸಿದರು. ಅಂದಿನಿಂದ, ತಾಯಿ ಪರಾಶಕ್ತಿ ಹಾಗೂ ಶ್ರೀ ಕಾಲಭೈರವರು ಅವರಲ್ಲಿ ಪ್ರವೇಶವಾಗಿ,ವಿಶೇಷವಾದ ದೈವೀಕ ಶಕ್ತಿಗಳ ಸಂಪನ್ನ ಮಾಡಿರುವರು.
ಆದ್ಯಾತ್ಮಿಕ ಶಕ್ತಿಯಿಂದ ಪುನಃಶ್ಚೇತನಗೊಂಡ ಶ್ರೀ ನರೇಂದ್ರನಾಥರು, ತನ್ನ ಸಂಸಾರ ಮಂದಿಯನ್ನೊಡಗೂಡಿಸಿಕೊಂಡು ದಿನನಿತ್ಯದ ಪೂಜಾಕೈಂಕರ್ಯಾದಿಗಳನ್ನು ನಡೆಸುತ್ತಿದ್ದರು. ಕ್ರಮೇಣ, ಪೂಜೆಯಲ್ಲಿ ಭಾಗವಹಿಸುವ ಭಕ್ತಾದಿಗಳ ಸಂಖ್ಯೆ ಏರತೊಡಗಿತು. ಶ್ರೀಗಳ ಉದಾತ್ತವಾದ ಆತ್ಮಿಕ ಶಕಿಯು ತನ್ನಿಂತಾನೇ ಪ್ರಚಾರವಾಗಿ, ಪೂಜಾಸಮಯದಲ್ಲಿ ಕ್ಷೇತ್ರಕ್ಕೆ ಬರುವ ಜನಸಂದೋಹ ಹಿರಿದಾಗುತ್ತಾ ಹೋಯಿತು.
“ರಜನಿ” ನಾಮಾಂಕಿತ ಗ್ರಹವು ಶ್ರೀ ಪರಾಶಕ್ತಿ ಕ್ಷೇತ್ರವಾಗಿ ಪರಿವರ್ತಿತವಾಯಿತು ಹಾಗೂ ದೈವೀಕತೆಯ ನೆಲೆಯಾಯಿತು. ಬಡವ-ಧನಿಕ, ಶಕ್ತ-ಅಶಕ್ತ ಅಥವಾ ಯಾವುದೇ ಜಾತಿ-ಭೇದವಿಲ್ಲದೇ ಸಹಸ್ರಾರು ಭಕ್ತಾದಿಗಳಿಗೆ ಶ್ರೀ ಕ್ಷೇತ್ರವು ಆಶ್ರಯ ನೀಡುತ್ತಾ ಬಂದಿದೆ. ತಾಯಿಯ ಸಾನಿಧ್ಯದಲ್ಲಿ ಎಲ್ಲರೂ ಸಮಾನರಾದುದರಿಂದ, ಇಲ್ಲಿ ಭೇಧ-ಭಾವಗಳಿಗೆ ಆಸ್ಪದವಿಲ್ಲ.
ಮಹಾತಾಯಿಯ ನಿರ್ದೇಶನುಸಾರ, ಶ್ರೀ ನರೇಂದ್ರನಾಥ ಸ್ವಾಮಿಗಳವರ ಶಾಸ್ತ್ರೀಯ, ತರ್ಕಬದ್ಧ ದ್ರಾಷ್ಠಾರತೆಯ ಮೂಲಕ ಅನುಷ್ಠಾನಗೊಳ್ಳುವ ಮೇರುಮೌಲ್ಯದ ತತ್ತ್ವಾದರ್ಶಗಳೇ ನೂರಾರು ಬಲ್ಲಿದರು, ಪಂಡಿತರು ಹಾಗೂ ಜ್ಯೋತಿಷ್ಯ ಶಾಸ್ತ್ರಜ್ಞರನ್ನು ಮರಕಡ ಕ್ಷೇತ್ರಕ್ಕೆ ಆಕರ್ಷಿಸುತ್ತಿದೆ. ವಿಚಾರವಾದಿಗಳು ಶ್ರದ್ಧಾವಂತರಲ್ಲಿ ಸಂಭವಿಸುವ ಗಮನಾರ್ಹ ಬದಲಾವಣೆಗಳನ್ನು ಗಮನಿಸಿ, ಆಶ್ಚರ್ಯಚಕಿತರಾಗಿರುವರು. ಕರುಣಾಮಯಿಯಾದ ತಾಯಿ ಪರಾಶಕ್ತಿಯು, ತನ್ನ ಮೂಲ ಓಂಕಾರ ಸ್ವರೂಪದಲ್ಲಿ ವಿಜ್ರಂಭಿತಳಾಗಿ ಶ್ರೀ ಕ್ಷೇತ್ರದಲ್ಲಿ ತನ್ನ ಭಕ್ತಾದಿಗಳಿಗೆ ಸಾಂತ್ವಾನ ನೀಡುತ್ತಿದ್ದಾಳೆ.
ಮಾನವತೆಯ ವಿಕಾಸತೆ ಹಾಗೂ ನಾಗರೀಕತೆಯ ಉಗಮವು ಜನರಲ್ಲಿ ಪೂಜಾಪರಿಕಲ್ಪನೆಯನ್ನು ಮೂಡಿಸಿತು. ಶಾಂತಿ-ಸಂಪನ್ನತೆಯನ್ನು ಅರಸುತ್ತಾ ಹೊರಟ ಮಾನವನು ತ್ರೇತಾಯುಗದ ಆರಂಭದಲ್ಲಿ ಪ್ರಕೃತಿಪೂಜೆಯ ಮಾಡಲು ಉಪಕ್ರಮಿಸಿದನು. ಅದಕ್ಕಾಗಿ ಶಾಂತ ಸರೋವರದ ದಡ, ಏಕಾಂತವಾದ ಗುಡ್ಡ-ಬೆಟ್ಟಗಳು ಅಥವಾ ದಟ್ಟ ಕಾನನಗಳ ಆಸರೆ ಹೊಕ್ಕನು. ತದನಂತರ, ದ್ವಾಪರಾಯುಗದಲ್ಲಿ ನೀತಿ-ನಿಯಮನುಸಾರ ದೇವರನ್ನು ಪೂಜಿಸುವ ಯಾಗ-ಯಜ್ಞಾದಿಗಳು ಪ್ರಸಿದ್ದ್ಹಿಗೆ ಬಂದವು.
ಕಲಿಯುಗದಲ್ಲಿ ಈ ದೇವತಾ ಸಂಕಲ್ಪವನ್ನು ಮೂರ್ತಿಯಲ್ಲಿ ಅವಾಹಿಸಿ ಪೂಜೆಯನ್ನು ಮಾಡುವ ಕ್ರಮ ಬೆಳೆದುಬಂದಿತು. ಇದೇ ಸಮಯದಲ್ಲಿ, ಅಥರ್ವ ವೇದವನ್ನು ತಳಹದಿಯಾಗಿಸಿ, ಕೆಲವು ಆಚಾರಗಳು ಹಾಗೂ ಪ್ರಾಣಿಬಲಿ ನೀಡುವಂತಹ ಪದ್ಧತಿಗಳೂ ಆಚರಣೆಗೆ ಬಂದವು. ಜನರು ದುಷ್ಟಶಕ್ತಿಗಳನ್ನು ಪ್ರಯೋಗಿಸಿ ಸ್ವಾರ್ಥಸಾಧನೆಗಾಗಿ ತಮ್ಮ ಶಕ್ತಿಯನ್ನು ವಿನಿಯೋಗಿಸತೊಡಗಿದರು. ಮಾನವನು ಅತಿಮಾನವನಾಗುವ ಕ್ಷುಲ್ಲಕ ಲಾಲಸೆಯ ಸೆರೆಯಾಗಿ, ಹೇಯವಾದ ವಾಮಾಚಾರ ಪದ್ಧತಿಗೆ ಶರಣು ಹೋದನು. ಈ ತೆರೆನ ದುರ್ಮಾರ್ಗ ಪ್ರೇರಿತ ಕ್ರಿಯೆಗಳು, ಪ್ರತಿಕ್ರಿಯೆಯ ಅಲೆಗಳನ್ನೇ ಎಬ್ಬಿಸಿ ಸಾಮಾನ್ಯ ಮನುಜರೆಲ್ಲಾ ಅದರ ಅಬ್ಬರಕ್ಕೆ ತತ್ತರಿಸಿ, ಕಷ್ಟ-ಕಾರ್ಪಣ್ಯದ ಕುಲುಮೆಯೊಳಗೆ ಸರಿದುಹೋದಂತಾಯಿತು.
ಈ ತರಹ ಪ್ರಕೃತಿಯ ಮೇಲಾದ ಅನಾಚಾರದ ದುಷ್ಪರಿಣಾಮಗಳನ್ನು ಒಂದಾನೊಂದು ಕಾಲಘಟ್ಟದಲ್ಲಿ ಸರಿಪಡಿಸಲೇಬೇಕು. ಆದ್ಯಾತ್ಮಿಕ ಚೌಕಟ್ಟಿನ ತಳಹದಿಯಲ್ಲಿ ಇಂತಹ ಸಂಕೀರ್ಣತೆಯ ಕೊಂಡಿಗಳನ್ನು ಎಳೆ-ಎಳೆಯಾಗಿ ಬಿಡಿಸಿ, ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಘನವೇತ್ತ ಕಾರ್ಯವೇ ಇಲ್ಲಿನ ಪ್ರಕ್ರಿಯೆ.
ಪ್ರಕ್ರಿಯೆಯಲ್ಲಿ ಭಾಗವಹಿಸಲು ಶ್ರೀ ಕ್ಷೇತ್ರದಲ್ಲಿ ಅಪಾರವಾದ ಜನಸಂದಣಿ ಸೇರುತ್ತದೆ. ಈ ಕ್ರಿಯೆಯ ಅಂಗವಾಗಿ, ಶ್ರೀ ಸ್ವಾಮಿಯವರು ತಾಯಿಯ ಇಚ್ಚೆಯಂತೆ ತಮ್ಮ ಅಮುಲ್ಯ ಸಂಕಲ್ಪ ಶಕ್ತಿಯ ಮೂಲಕ ಚೈತನ್ಯ ಉದ್ಧೀಪನಾ ಕಾರ್ಯವನ್ನು ನೆರವೇರಿಸುತ್ತರೆ. ಮಹತಾಯಿಯ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಈ ಶುಭಕಾರ್ಯವು ಆರಂಭವಾಗುತ್ತದೆ. ನಂತರ, ಪೂರ್ವದಲ್ಲಿ ಓಂಕಾರದಲ್ಲಿ ವಿಲೀನಗೊಳ್ಳದ ಋಷಿಮುನಿಗಳ ಆತ್ಮಿಕ ಚೈತನ್ಯ ಹಾಗೂ ದೈವೀಕ ಚೈತನ್ಯಗಳ ಆವಾಹನೆ ಮಾಡುವರು ಸ್ವಾಮಿಗಳು. ಸಾಮಾನ್ಯವಾಗಿ ಈ ಚೈತನ್ಯಗಳು ಮಾನವರೊಂದಿಗೆ ಅಥವಾ ಅಲೌಕಿಕ ಶಕ್ತಿಗಳೊಂದಿಗೆ ಸಂಯೋಜಿತವಾಗಿರುತ್ತದೆ. ಪ್ರಕ್ರಿಯೆಯ ಸಂದರ್ಭದಲ್ಲಿ, ಈ ಚೈತನ್ಯಗಳು ಕೆಲವು ವ್ಯಕ್ತಿಗಳ ಮೂಲಕ ದೈವೀಕ ಪ್ರೇರಣೆಯಂತೆ ಪ್ರಕಟವಾಗುತ್ತದೆ. ತದನಂತರ ಸ್ವಾಮಿಗಳು ತಮ್ಮ ದಿವ್ಯದೃಷ್ಟಿಯ ಮೂಲಕ ಪ್ರಕಟಿತ ಚೈತನ್ಯಗಳ ಮೂಲವನ್ನು ಗ್ರಹಿಸಿ ಜಗನ್ಮಾತೆ ಸಾನಿಧ್ಯದಲ್ಲಿ ತನ್ನ ಆದ್ಯಾತ್ಮಿಕ ಶಕ್ತಿಯ ಸಿಂಚನದಿಂದ ಭಾಧ್ಯತೆಗಳ ಬಂಧನವನ್ನು ಕಳಚಿ, ಅವುಗಳ ಮುಕ್ತಿಯ ಮಾರ್ಗವನ್ನು ಸುಗಮಗೊಳಿಸುವರು.
ಶ್ರೀ ಸ್ವಾಮಿಯವರು ಪರಬ್ರಹ್ಮಸ್ವರೂಪಿಯಾದ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರರ ತಾಯಿಯಾದ ಶ್ರೀ ಪರಾಶಕ್ತಿಯ ಸಾರ್ಮಭೌಮತೆಯನ್ನು ಸದಾ ಪ್ರತಿಪಾದಿಸುತ್ತಿರುವರು. ದೇಶಾದ್ಯಂತ ಪೂಜಿಸುತ್ತಿರುವ ಇತರ ದೇವ ದೇವತೆಯರು ಒಂದೋ ಅವತಾಅರಗಳು ಅಥವಾ ಶಕ್ತಿಯ ರೂಪದಲ್ಲಿ ಸೃಷ್ಟಿಸಲ್ಪಟ್ಟವರೇ ಆಗಿರುವರು. ಲೋಕಕಲ್ಯಾಣಾರ್ಥವಾಗಿ ಧರೆಗಿಳಿದ ಇವರು ಈ ತನಕ ಮೂಲತ್ವವನ್ನು ಸೇರಿಲ್ಲ.
ಮಂಗಳೂರು ನಗರದ ಸದ್ದು-ಗದ್ದಲದಿಂದ ದೂರವಿರುವ ಶ್ರೀ ಕ್ಷೇತ್ರವು ಸುಮಾರು ೩,೨೦೦ ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಮಧ್ಯದಲ್ಲಿ ಮಂದಿರವಾಗಿ ಪರಿವರ್ತಿತವಾಗಿರುವ ಮನೆಯಿದೆ. ೨,೦೦೦ ಕ್ಕಿಂತಲೂ ಅಧಿಕ ಸಂಖ್ಯೆಯ ಭಕ್ತರು ಇಡೀ ರಾತ್ರಿ ಜರುಗುವ ದೇವನಡೆಯನ್ನು ಏಕಾಗ್ರಚಿತ್ತದಿಂದ ವೀಕ್ಷಿಸಿ, ಮರುದಿನ ಬೆಳಿಗ್ಗೆ ಅಸ್ಖಲಿತವಾಗಿ ಸ್ಪುರಣಗೊಳ್ಳುವ ಸ್ವಾಮಿಗಳ ದಿವ್ಯನುಡಿಗಳನ್ನು ಶೃದ್ಧೆಯಿಂದ ಲಾಲಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಬಳಿಕದ ಪರಿಹಾರನಡೆಯಲ್ಲೂ ತಾದಾತ್ಮತೆಯಿಂದ ಭಾಗಿಯಾಗುವುದನ್ನು ಕಂಡಾಗ ಆಶ್ಚರ್ಯವಾಗಲೇಬೇಕು. ಅಚಲವಾದ ನಂಬಿಕೆ, ಮೌಲಿಕ ವಿಷಯಗ್ರಹಣದ ತುಡಿತ ಮತ್ತು ಜನ್ಮ-ಜನ್ಮಾಂತರದ ಪಾಪಗಳ ಕೊಳೆಯ ನೀಗಿಸುವಿಕೆ-ಈ ಅಂಶಗಳೇ ಭಕ್ತಜನರ ಉತ್ಸಾಹಕ್ಕೆ ಪ್ರೇರಣದಾಯಕವಾಗಿದೆ. ಇಲ್ಲಿ ನಡೆಯುವ ಪ್ರಕ್ರಿಯ ಹಾಗೂ ಪರಿಹಾರಕ್ರಿಯೆಗಳಲ್ಲಿ ಭಾಗವಹಿಸುವ ಭಕ್ತರು ತಮ್ಮ ಅಂತರಾಳದಲ್ಲಿ ವಿಶಿಷ್ಟವಾದ ನಿರ್ಮಲಮಯವಾದ ಬದಲಾವಣೆಯನ್ನು ಅನುಭವಿಸುತ್ತಾರೆ ಮತ್ತು ಸರ್ವಾಂತರ್ಯಮಯಿಯಾದ ಪರಾಶಕ್ತಿಯಲ್ಲಿ ಪೂರ್ಣ ವಿಶ್ವಾಸವನ್ನು ಹೊಂದುತ್ತಾರೆ. ಚಿರಸ್ಥಾಯಿಯಾದ ಶಾಂತಿ ಮತ್ತು ಅಲೌಕಿಕ ಸುಖದ ಪ್ರಾಪ್ತಿಯ ಅಭಿಲಾಷೆ ಹೊಂದಿದಂತಹ ಜನರನ್ನು ಶ್ರೀ ಕ್ಷೇತ್ರವು ತಾನಾಗಿಯೇ ಆಕರ್ಷಿಸುತ್ತದೆ.
ಬರುಷಃ ಪ್ರತೀ ವ್ಯಕ್ತಿಯ ಸಮಸ್ಯೆಗಳನ್ನು ತದೇಕ ಚಿತ್ತದಿಂದ ಆಲಿಸಿ, ಸೂಕ್ತವಾದ ಸಮಾಧಾನ ಹಾಗೂ ಪ್ರಶಸ್ತ ಪರಿಹಾರ, ಅದೂ ಉಚಿತವಾಗಿ ನೀಡುವ ಕ್ಷೇತ್ರವೆಂದರೆ ಇದೊಂದೇ ಎಂದರೆ ಅತಿಶಯೋಕ್ತಿಯಾಗಲಾರದು. ಸ್ವಾಮಿಯವರು ಹೇಳುವಂತೆ, ಆ ಮಹಾತಾಯಿಯು ತನ್ನ ಭಕ್ತರ ಪಾಪಕರ್ಮಗಳ ಅಥವಾ ದೋಷಗಳ ಪ್ರಾಯಶ್ಚಿತ್ತ-ಪರಿಹಾರಾರ್ಥವಾಗಿ ಯಾವುದೇ ಕಾಣಿಕೆ ಅಥವಾ ಹರಕೆಗಳನ್ನು ಅಪೇಕ್ಷಿಸುವುದಿಲ್ಲ. ಆಕೆ ಅಪೇಕ್ಷಿಸುವುದು ಭಕ್ತ ಜನರು ತಿಳಿದೋ-ತಿಳಿಯದೆಯೋ ತಮ್ಮ ಪ್ರಕೃತ ಯಾ ಪೂರ್ವಜನ್ಮದಲ್ಲಿ ಎಸಗಿದ ತಪ್ಪುಗಳಿಗಾಗಿ ಅರ್ಪಿಸುವ ಪಶ್ಚಾತ್ತಾಪದ ಕಣ್ಣೀರು ಮಾತ್ರ. ಈ ಕಣ್ಣೀರೇ ಭಕ್ತಜನರನ್ನು ತಾಯಿಯ ಕೃಪಕಟಾಕ್ಷದ ಭಾಜನರನ್ನಗಿಸಿ ಪರಿಮಾರ್ಜನೆಯತ್ತ ಒಯ್ಯುವುದು. ಇದುವೇ ತಪಸ್ಸಾಧನೆಯಷ್ಟು ಮಹತ್ತರವಾದದ್ದು ಎಂದು ಉದ್ಧರಿಸುವ ಸ್ವಾಮಿಗಳು ಮುಂದುವರಿಯುತ್ತಾ, ಆ ಮಹಾತಾಯಿಯಲ್ಲಿ ನಿಮ್ಮ ಸುದೃಢವಾದ ನಂಬಿಕೆಯೊಂದನ್ನುಳಿದು ಬೇರೇನನ್ನೂ ತರದಿರಿ. ಆಕೆಯ ದಯಾಸಾಗರದಿಂದ ಸಮೃದ್ಧವಾದ ಅನುಗ್ರಹ ಪಡಕೊಳ್ಳಿರಿ ಎನ್ನುತ್ತಾರೆ.
ಭಕ್ತಜನರು ಕ್ಷೇತ್ರದ ದೈನಂದಿನ ಕೆಲಸ-ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ಎಲ್ಲಿ ನೋಡಿದರೂ ಶಿಸ್ತು-ಅಚ್ಚುಕಟ್ಟು ಎದ್ದು ಕಾಣುತ್ತದೆ. ಕ್ಷೇತ್ರವನ್ನು ಸಂದರ್ಶಿಸುವ ಜನಸಂದೋಹಕ್ಕೆ ಈ ಸ್ವಯಂಸೇವಕರೇ ನಿಸ್ವಾರ್ಥವಾಗಿ ಅನ್ನ ಪ್ರಸಾದವನ್ನು ಉಣಬಡಿಸುತಾರೆ. ನಿಶ್ಚಯವಾಗಿಯೂ ಈ ಕ್ಷೇತ್ರವು ನಿಜಾರ್ಥದ ಪ್ರಜಾತಾಂತ್ರಿಕತೆಯ ಪರಿಕಲ್ಪನೆಯ ಸಾಕಾರತೆಯೇ ಆಗಿದೆ.